ಬೆಂಗಳೂರು : ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದ್ದು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಡಿತಗೊಳಿಸಿದೆ. ಮೈಸೂರಿಂದ ಬೆಂಗಳೂರಿಗೆ ಬರುವ ವಾಹನಗಳು ಎಕ್ಸಿಟ್ ಆಗುತ್ತಿದ್ದಕ್ಕೆ ಇದೀಗ ಬ್ರೇಕ್ ಹಾಕಲಾಗಿದೆ.
ಹೌದು ಬಿಡದಿಯಿಂದ ಮುಂದೆ ಬಂದು ವಾಹನಗಳು ಎಕ್ಸಿಟ್ ಆಗ್ತಿದ್ದಕ್ಕೆ ಬ್ರೇಕ್ ಹಾಕಲಾಗಿದೆ. ಬಿಡದಿಯಿಂದ ಮುಂದೆ ಸರ್ವಿಸ್ ರಸ್ತೆಗೆ ಇಳಿದು ವಾಹನ ಸವಾರರು ಟೋಲ್ ತಪ್ಪಿಸುತ್ತಿದ್ದರು. ಶೇಷಗಿರಿ ಹಳ್ಳಿ ಬಳಿ ಟೋಲ್ ಕಟ್ಟದೆ ವಾಹನಗಳು ಬೆಂಗಳೂರು ತಲುಪುತ್ತಿದ್ದವು. ಇದೀಗ ಟೋಲ್ ತಪ್ಪಿಸುವ ವಾಹನ ಗಳಿಗೆ ಹೆದ್ದಾರಿ ಪ್ರಾಧಿಕಾರ ಬ್ರೇಕ್ ಹಾಕಿದೆ.
ಬಿಡದಿ ಬಳಿ ಎಕ್ಸಿಟ್ ರೋಡ್ ಬಂದ್ ಮಾಡಿದ್ದು ಎಂಟ್ರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಸವಾರರು ಇದೀಗ ಆಕ್ರೋಶ ಹೊರಹಾಕಿದ್ದಾರೆ. ಎಕ್ಸಿಟ್ ರೋಡ್ ಬಂದ್ ಬಗ್ಗೆ ಸೂಚನಾ ಫಲಕ ಅಳವಡಿಸಿಲ್ಲ ಎಂದು ಕಿಡಿ ಕಾರಿದ್ದಾರೆ.