ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಮರಾಠ ಮಹಾಸಂಘ ಪುಂಡಾಟ ಮೆರೆದಿದ್ದು, ಕರ್ನಾಟಕ ಸಾರಿಗೆ ಬಸ್ ಗಳಿಗೆ ಕಪ್ಪು ಮಸಿ ಬಳಿದು ಕ್ಯಾತೆ ತೆದಿದಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಭಾರತ ರಾಜ್ಯಗಳಿಂದ ಕೂಡಿರುವ ದೇಶವಾಗಿದೆ. ಕಾನೂನು ಎಲ್ಲರಿಗೂ ಒಂದೇ . ಗಲಾಟೆ ಮಾಡಿದವರ ವಿರುದ್ಧ ಮಹಾರಾಷ್ಟ್ರ ಸಿಎಂ ಕೂಡಲೇ ಕ್ರಮ ಕೈಗೊಳ್ಳಬೇಕು. ನಮ್ಮ ರಾಜ್ಯದ ಗಡಿ ಜನರನ್ನು ಉಳಿಸಿಕೊಳ್ಳುತ್ತೇವೆ. ಪ್ರಕರಣ ಸುಪ್ರೀಂಕೋರ್ಟ್ ಇತ್ಯರ್ಥ ಮಾಡಲಿದೆ ಎಂದರು.
BIGG NEWS : ಪ್ರವಾಸಿಗರಿಗೆ ಬಿಗ್ ಶಾಕ್ ..! ಇನ್ಮುಂದೆ ʼ ಪಾಸ್ಪೋರ್ಟ್ನಲ್ಲಿ ಸರ್ ನೇಮ್ ಕಡ್ಡಾಯʼ : ಯುಎಇ
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಮರಾಠ ಮಹಾಸಂಘವು ನವೆಂಬರ್ 25 ರಂದು ಪುಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ಸಂಕೇತವಾಗಿ, ಮಹಾಸಂಘ ಪುಂಡರು ಪುಣೆಯಲ್ಲಿ ರಾಜ್ಯ ಮತ್ತು ಕರ್ನಾಟಕದ ನಡುವೆ ಸಂಚರಿಸುವ ಬಸ್ಸುಗಳ ಮೇಲೆ ‘ಸಾರ್ವಜನಿಕ ಪ್ರತಿಭಟನೆ’, ‘ಜೈ ಮಹಾರಾಷ್ಟ್ರ’ ಎಂದು ಬರೆದರು.