ಕೆಎನ್ಎನ್ಡಿಜಿಟಲ್ ಡೆಸ್ಕ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಹತ್ಯೆ ಪ್ರಯತ್ನ ಮಾಡಲಾಗಿದ್ದು, ಸಧು ಅವ್ರು ಪ್ರಾಣಪಾಯದಿಂದ ಪಾರಾಗಿದ್ದಾರೆ ಯುರೋ ವೀಕ್ಲಿ ನ್ಯೂಸ್ ವರದಿ ಮಾಡಿದೆ. ಈ ಮಾಹಿತಿಯನ್ನ ಬುಧವಾರ ಜನರಲ್ ಜಿವಿಆರ್ ಟೆಲಿಗ್ರಾಮ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಪ್ರಯತ್ನವು ಯಾವಾಗ ನಡೆಯಿತು ಅನ್ನೋದನ್ನ ವರದಿ ಸ್ಪಷ್ಟಪಡಿಸಿಲ್ಲ.
ಪುಟಿನ್ ಅವರ ಲಿಮೋಸಿನ್ ಕಾರಿನ ಎಡ ಮುಂಭಾಗದ ಚಕ್ರಕ್ಕೆ ಡಿಕ್ಕಿ ಹೊಡೆಯಲಾಗಿದೆ ಎಂದು ಯುರೋ ವೀಕ್ಲಿ ವರದಿ ಮಾಡಿದೆ. ಇನ್ನು ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಹಲವರನ್ನ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ವ್ಲಾಡಿಮಿರ್ ಪುಟಿನ್ ತಮ್ಮ ಅಧಿಕೃತ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕನಿಷ್ಠ ಐದು ಹತ್ಯೆ ಪ್ರಯತ್ನಗಳಿಂದ ಬದುಕುಳಿದಿದ್ದಾರೆ ಎಂದು 2017ರಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿದರು.
ಅಂದ್ಹಾಗೆ, ಪುಟಿನ್ ಗುರುವಾರ ಉಜ್ಬೇಕಿಸ್ತಾನದಲ್ಲಿ ಚೀನಾದ ನಾಯಕ ಕ್ಸಿ ಜಿನ್ಪಿಂಗ್ ಅವರನ್ನ ಭೇಟಿಯಾಗಲಿದ್ದಾರೆ, ಅಲ್ಲಿ ಇಬ್ಬರೂ ನಾಯಕರು ಪ್ರಾದೇಶಿಕ ಭದ್ರತಾ ಗುಂಪು ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲಿದ್ದಾರೆ.