ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್’ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಹಿರಿಯ ನಟ ಶುಕ್ರವಾರ ಬೆಳಿಗ್ಗೆ ಹೈದರಾಬಾದ್’ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ತೆಲುಗು ಸಿನಿಮಾಗಳಲ್ಲಿ ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್, ಖಳನಾಯಕ, ಹಾಸ್ಯನಟ ಮತ್ತು ಎಲ್ಲಾ ರೀತಿಯ ಪಾತ್ರಗಳಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿದ್ದ ಹಿರಿಯ ನಟ, ನಿರ್ಮಾಪಕರಾಗಿಯೂ ಕೆಲವು ಚಲನಚಿತ್ರಗಳನ್ನ ನಿರ್ಮಿಸಿದ್ದಾರೆ. ಅವರು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳನ್ನ ಗುರುತಿಸಿ, ನವರಸ ನಟನಾ ಸಾರ್ವಭೌಮ ಎಂಬ ಬಿರುದು ನೀಡಲಾಗಿದೆ. ತೆಲುಗು ಚಿತ್ರರಂಗದಲ್ಲಿ ಎಸ್. ವಿ. ರಂಗರಾವ್ ನಂತರ ಇಂತಹ ವೈವಿಧ್ಯಮಯ ಪಾತ್ರಗಳನ್ನ ನಿರ್ವಹಿಸಿದವರಲ್ಲಿ ಕೈಕಲಾ ಕೂಡ ಒಬ್ಬರು.
ವೈಯಕ್ತಿಕ ವಿವರ.!
ಹೆಸರು: ಕೈಕಲಾ ಸತ್ಯನಾರಾಯಣ
ಹುಟ್ಟಿದ ದಿನಾಂಕ: 25 ಜುಲೈ 1935
ಪೋಷಕರು: ಸೀತಾರಾಮಮ್ಮ, ಲಕ್ಷ್ಮಿನಾರಾಯಣ ಅವರ
ಪತ್ನಿ: ನಾಗೇಶ್ವರಮ್ಮ
ಮಕ್ಕಳು: ಲಕ್ಷ್ಮಿನಾರಾಯಣ, ಕೆ.ವಿ.ರಾಮರಾವ್, ಪದ್ಮಾವತಿ, ರಮಾದೇವಿ
JOB ALERT : 814 P.U ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ : ಸಚಿವ ಬಿ.ಸಿ ನಾಗೇಶ್
BREAKING NEWS : ಶೀಘ್ರ ‘ರಷ್ಯಾ-ಉಕ್ರೇನ್’ ಯುದ್ಧ ಅಂತ್ಯ ; ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ |Ukraine-Russia war