ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಜನಪ್ರಿಯ ಚಲನಚಿತ್ರ ನಟ ನಾಸರ್ʼಗೆ ಗಂಭೀರವಾಗಿ ಗಾಯಗೊಂಡಿದ್ದು, ಸಧ್ಯ ಅವ್ರನ್ನ ಅಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳು ಚಿತ್ರದ ಚಿತ್ರೀಕರಣವು ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ನಟರಾದ ಸುಹಾಸಿನಿ, ಮೆಹ್ರೀನ್ ಮತ್ತು ಶಿಯಾಜಿ ಶಿಂಧೆ ಅವರೊಂದಿಗೆ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ನಾಸಿರ್ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರಾದ್ರೂ, ಅಭಿಮಾನಿಗಳು ಆತಂಕದಲ್ಲಿದ್ದಾರೆ.
ನಾಸರ್ ಮೆಟ್ಟಿಲುಗಳನ್ನ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದ್ದು, ಅವರ ಎಡಗಣ್ಣಿನ ಕೆಳಗೆ ಗಾಯವಾಗಿದ್ದು, ಇದು ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ದಕ್ಷಿಣದಲ್ಲಿ ವಿಶಿಷ್ಟ ನಟ ಎಂದೇ ಖ್ಯಾತರಾದ ನಟ ನಾಸರ್, ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಬಾಹುಬಲಿಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾಸರ್ ದೊಡ್ಡ ಹೀರೋಗಳ ತಂದೆಯಾಗಿ, ಪೊಲೀಸ್ ಆಗಿ, ಖಳನಾಯಕನಾಗಿ ಮತ್ತು ಹಾಸ್ಯನಟನಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಆದ್ರೆ, ಇತ್ತೀಚೆಗೆ ತಮ್ಮ ಚಲನಚಿತ್ರಗಳನ್ನ ಕಡಿಮೆ ಮಾಡಿದ್ದಾರೆ. ಅವರು ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಸರ್ ಇತ್ತೀಚೆಗೆ ತನ್ನ ವಯಸ್ಸಿನ ಕಾರಣದಿಂದಾಗಿ ಚಲನಚಿತ್ರಗಳನ್ನು ಮಾಡುತ್ತಿಲ್ಲ ಎಂದು ಘೋಷಿಸಿದರು. ಈ ಪ್ರಕ್ರಿಯೆಯಲ್ಲಿ ಅವ್ರು ಗಾಯಗೊಂಡಿದ್ದಾರೆ.