ನವದೆಹಲಿ : ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಶುಕ್ರವಾರ 2023ರ ಆಗಸ್ಟ್ 22 ರವರೆಗೆ ಒಂದು ವರ್ಷ ವಿಸ್ತರಿಸಿದೆ. ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ ಈ ಆದೇಶವನ್ನ ಹೊರಡಿಸಲಾಗಿದೆ.
ಅಸ್ಸಾಂ-ಮೇಘಾಲಯ ಕೇಡರ್ನ 1984ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಭಲ್ಲಾ ಅವರನ್ನು ಆಗಸ್ಟ್ 2019ರಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಗೃಹ ಸಚಿವಾಲಯದ ಗೃಹ ಕಾರ್ಯದರ್ಶಿಯಾಗಿ ಭಲ್ಲಾ ಅವರ ಸೇವೆಯನ್ನು ಆಗಸ್ಟ್ 22, 2022 ರಿಂದ ಒಂದು ವರ್ಷದ ಅವಧಿಗೆ ಅಂದರೆ ಆಗಸ್ಟ್ 22, 2023 ರವರೆಗೆ ವಿಸ್ತರಿಸಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.