ನವದೆಹಲಿ : ಪ್ರಧಾನಿ ಮೋದಿ ಅವ್ರ ಅಧ್ಯಕ್ಷತೆಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟದ ಸಭೆ ನದಿದ್ದು,. ಅನೇಕ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಯಿತು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಕೇಂದ್ರ ಸಚಿವ ಸಂಪುಟ ಇಂದು ಅನುಮೋದಿಸಿದೆ ಎಂದರು.
ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಲಿದ್ದು, ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸಲಾಗುವುದು. ಈ ಯೋಜನೆಯ ಅಡಿಯಲ್ಲಿ, 2030 ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸಲಾಗುವುದು ಎಂದು ಸಚಿವರು ಹೇಳಿದರು. ಇನ್ನು ಖರೀದಿದಾರರು ಮತ್ತು ಮಾರಾಟಗಾರರನ್ನ ಒಂದೇ ಸೂರಿನಡಿ ತರಲು ಹಸಿರು ಹೈಡ್ರೋಜನ್ ಕೇಂದ್ರವನ್ನ ಅಭಿವೃದ್ಧಿಪಡಿಸಲಾಗುವುದು. ದೇಶದಲ್ಲಿ ಎಲೆಕ್ಟ್ರೋಲೈಜರ್ ತಯಾರಿಕೆಗೆ ಐದು ವರ್ಷಗಳವರೆಗೆ ಪ್ರೋತ್ಸಾಹಧನ ಇರುತ್ತದೆ ಎಂದರು.