ನವದೆಹಲಿ : ಪ್ರತಿ ವರ್ಷದಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 2022ರ ಡಿಸೆಂಬರ್ ಸೆಷನ್’ಗೆ ಯುಜಿಸಿ-ನೆಟ್ ಪರೀಕ್ಷೆಯನ್ನ ನಡೆಸಲಿದೆ. ಅದ್ರಂತೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರು ಯುಜಿಸಿ ಎನ್ಇಟಿ ದಿನಾಂಕಗಳನ್ನ ಪ್ರಕಟಿಸಿದೆ. ಯುಜಿಸಿ ಅಧ್ಯಕ್ಷರು ಫೆಬ್ರವರಿ 21 ಮತ್ತು ಮಾರ್ಚ್ 10, 2023 ರ ನಡುವೆ ಪರೀಕ್ಷೆಗಳನ್ನ ನಡೆಸಲಾಗುವುದು ಎಂದು ಹೇಳಿದರು. ಅಧಿಕೃತ websiteugcnet.nta.nic.in ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
The National Testing Agency (NTA) will conduct UGC-NET December 2022 for ‘Junior Research Fellowship’ and eligibility for ‘Assistant Professor’ in 83 subjects in Computer Based Test (CBT) mode.
— Mamidala Jagadesh Kumar (@mamidala90) December 29, 2022
ಆಸಕ್ತ ಅಭ್ಯರ್ಥಿಗಳು, ಅರ್ಹತೆಯನ್ನ ಪರಿಶೀಲಿಸಿದ ನಂತರ, ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಇಂದಿನಿಂದ (ಡಿಸೆಂಬರ್ 29) ನೋಂದಣಿ ಪ್ರಾರಂಭವಾಗಲಿದೆ. ಆನ್ ಲೈನ್’ನಲ್ಲಿ ಅರ್ಜಿ ನಮೂನೆಯನ್ನ ಭರ್ತಿ ಮಾಡಲು ಜನವರಿ 17 ಕೊನೆಯ ದಿನಾಂಕವಾಗಿದೆ. ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಸಂದರ್ಭದಲ್ಲಿ ಸ್ವೀಕರಿಸಲಾಗುವುದಿಲ್ಲವಾದ್ದರಿಂದ ಅಭ್ಯರ್ಥಿಗಳು ಜನವರಿ 17ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸುವುದನ್ನ ಖಚಿತಪಡಿಸಿಕೊಳ್ಳಬೇಕು.
Announcement on UGC-NET December 2022:
NTA has been entrusted by UGC for conducting UGC-NET, which is a test to determine the eligibility of Indian nationals for ‘Assistant Professor’ and ‘JRF and Assistant Professor’ in Indian universities and colleges.— Mamidala Jagadesh Kumar (@mamidala90) December 29, 2022
‘QR ಕೋಡ್’ ಸ್ಕ್ಯಾನ್ ಮೂಲಕ ಪಾವತಿ ಮಾಡ್ತಿರಾ.? ಒಂದು ಸಣ್ಣ ತಪ್ಪು ನಿಮ್ಮ ಖಾಲಿ ಖಾತೆ ಮಾಡ್ಬೋದು ಎಚ್ಚರ
BREAKING NEWS: ವಯೋಸಹಜ ಕಾಯಿಲೆಯಿಂದ ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್ ಪ್ರಭಾಕರ್ ಇನ್ನಿಲ್ಲ