ಚಂದೌಲಿ : ಚಂದೌಲಿ, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಹೊರಗೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಫೋಟವು ಎಷ್ಟು ಜೋರಾಗಿತ್ತೆಂದರೆ, ಅದು 500 ಮೀಟರ್ ದೂರದವರೆಗೆ ಕೇಳಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟವು ಹತ್ತಿರದ ಮನೆಗಳಲ್ಲಿನ ಗಾಜುಗಳನ್ನು ಚೂರುಚೂರು ಮಾಡಿತು ಎನ್ನಲಾಗಿದೆ.
ಸ್ಥಳೀಯ ಪೊಲೀಸ್ ಅಧೀಕ್ಷಕರು ಮತ್ತು ಮುಘಲ್ ಸರಾಯ್ ಶಾಸಕ ಸ್ಥಳಕ್ಕೆ ಆಗಮಿಸಿದರು ಎನ್ನಲಾಗಿದೆಸುತ್ತಮುತ್ತಲಿನ ಪ್ರದೇಶಗಳ ಭದ್ರತಾ ಕ್ಯಾಮೆರಾ ದೃಶ್ಯಾವಳಿಗಳನ್ನು ತನಿಖೆ ಮಾಡಲಾಗುತ್ತಿದೆ.