ವಾರಣಾಸಿ : ಶೃಂಗಾರ ಗೌರಿ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣದ ತೀರ್ಪನ್ನ ನ್ಯಾಯಾಲಯ ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿದೆ. ಎರಡೂ ಕಡೆಯವರ ವಿಚಾರಣೆ ಪೂರ್ಣಗೊಂಡಿದ್ದು, ಈಗ ಸೆಪ್ಟೆಂಬರ್ 12ರಂದು ತೀರ್ಪು ಪ್ರಕಟವಾಗಲಿದೆ.
ಜ್ಞಾನವಾಪಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಔರಂಗಜೇಬ್ ಕೂಡ ಪ್ರವೇಶಿಸಿದ್ದು, ಮಸೀದಿಯ ಭೂಮಿ ಔರಂಗಜೇಬನ ಆಸ್ತಿ ಎಂದು ಮಸೀದಿಯ ಪರವಾಗಿ ವಾದಿಸಲಾಗಿದೆ. ಈ ಪ್ರಕರಣದಲ್ಲಿ ಮುಸ್ಲಿಮ್ ಪರವಾಗಿ ವಾದ-ಪ್ರತಿವಾದಗಳು ಪೂರ್ಣಗೊಂಡ ನಂತ್ರ ಇಂದು ಹಿಂದೂ ಕಡೆಯವರು ಆಕ್ಷೇಪಣೆಗೆ ಪ್ರತ್ಯುತ್ತರವನ್ನ ಸಲ್ಲಿಸಲಿದ್ದಾರೆ.