ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಕೋನಸೀಮಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ದೊಡ್ಡ ಅವಘಡ ನಡೆಸಿದ್ದು, ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಂಪಲ್ಲಿ ಗ್ರಾಮದಲ್ಲಿ ನದಿ ದಂಡೆಗೆ ಸಾಗಿಸುವಾಗ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದರಲ್ಲಿ ಟಿಡಿಪಿ ನಾಯಕರು ಪ್ರಯಾಣಿಸುತ್ತಿದ್ದರು. ಇನ್ನು ದೋಣಿ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿದ್ದು, ಈ ವೇಳೆ ದೇವಿನೇನಿ ಉಮಾ ಸೇರಿದಂತೆ ಎಲ್ಲರೂ ನದಿಗೆ ಬಿದ್ದಿದ್ದಾರೆ. ಇನ್ನು ಅಲ್ಲಿನ ಸ್ಥಳೀಯ ಮೀನುಗಾರರು ಟಿಡಿಪಿ ನಾಯಕರನ್ನ ರಕ್ಷಿಸಿದರು. ಆದಾಗ್ಯೂ, ಚಂದ್ರಬಾಬು ಅಪಘಾತದಿಂದ ಪಾರಾಗಿದ್ದಾರೆ. ಅಂದ್ಹಾಗೆ, ಮನೇಪಲ್ಲಿಯಲ್ಲಿ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೋಂಪಲ್ಲಿ ಬಂದರಿನ ಬಳಿ ಈ ಅಪಘಾತ ಸಂಭವಿಸಿದೆ.
ರಾಜೋಲು ಮಂಡಲದ ಸೋಂಪಲ್ಲಿ ಬಂದರಿನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ಚಂದ್ರಬಾಬು ಸೇರಿದಂತೆ 15 ಜನರು ದೋಣಿಯಲ್ಲಿದ್ದರು. ಕೋನಸೀಮಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಚಂದ್ರಬಾಬು ಅವರ ಭೇಟಿ ಇಂದು ಮತ್ತು ನಾಳೆ ನಡೆಯಲಿದೆ. ಚಂದ್ರಬಾಬು, ಅಚಂತಾ, ಪಿ ಗನ್ನವರಂ, ರಾಜೋಲು, ಪಾಲಕೊಲ್ಲು ಮತ್ತು ನರಸಾಪುರಂ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇನ್ನು ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಚಂದ್ರಬಾಬು ಆಂಧ್ರಪ್ರದೇಶ ಸರ್ಕಾರವನ್ನು ಟೀಕಿಸಿದರು. ಕಾಲಿಗೆ ಮಣ್ಣು ಕೂಡ ಅಂಟಿಸಿಕೊಳ್ಳದೇ ಹೆಲಿಕಾಪ್ಟರ್ʼನಲ್ಲಿ ಪ್ರಯಾಣಿಸಿದ್ರೆ, ಜನರ ಸಮಸ್ಯೆಗಳನ್ನ ಹೇಗೆ ತಿಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.