ಹೈದರಾಬಾದ್ : ಸೂಪರ್ ಸ್ಟಾರ್ ಕೃಷ್ಣ ಅವ್ರಿಗೆ ಹೃದಯಾಘಾತವಾಗಿದ್ದು, ನಗರದ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ನಟ ಕೃಷ್ಣ ಅವ್ರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಕಾಂಟಿನೆಂಟಲ್ ಆಸ್ಪತ್ರೆಯ ವೈದ್ಯ ವೈದ್ಯ ಎನ್.ರೆಡ್ಡಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದು, ಸೋಮವಾರ ಬೆಳಗಿನ ಜಾವ 2 ಗಂಟೆಗೆ ಹೀರೋ ಕೃಷ್ಣ ಅವ್ರನ್ನ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.
ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಕೃಷ್ಣ ಅವರ ಆರೋಗ್ಯ ಸ್ಥಿತಿ ಸಧ್ಯ ಚಿಂತಾಜನಕವಾಗಿದೆ. ಹೀಗಾಗಿ 24 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ನಿರಂತರ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಹೃದ್ರೋಗ ತಜ್ಞರ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ರೆಡ್ಡಿ ತಿಳಿಸಿದರು.
ವಿಶ್ವವಿಖ್ಯಾತ ‘KRS’ ನಲ್ಲಿ ಆತಂಕ ಮೂಡಿಸಿದ ಚಿರತೆ : ಬೃಂದಾವನಕ್ಕೆ ಪ್ರವಾಸಿಗರ ನಿಷೇಧ ಮುಂದುವರಿಕೆ
BIGG NEWS: ಮಂಗಳೂರಿನ ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ: ಗಾಯಗೊಂಡ ಹುಲಿ ಮರಿ ಸಾವು