ನವದೆಹಲಿ : ದ್ವೇಷ ಭಾಷಣಕಾರರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, “ಇದು 21 ನೇ ಶತಮಾನ, ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ?” ಎಂದು ಪ್ರಶ್ನಿಸಿದೆ.
ದ್ವೇಷ ಭಾಷಣಗಳ ಮೇಲಿನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಧರ್ಮ-ತಟಸ್ಥ ಎಂದು ಹೇಳಲಾಗುವ ದೇಶಕ್ಕೆ ಈ ಪರಿಸ್ಥಿತಿ ಆಘಾತಕಾರಿಯಾಗಿದೆ” ಎಂದು ಹೇಳಿದೆ.
ಅರ್ಜಿಯಲ್ಲಿ “ಭಾರತದಲ್ಲಿ ಮುಸ್ಲಿಂ ಸಮುದಾಯವನ್ನ ಗುರಿಯಾಗಿಸುವ ಮತ್ತು ಹೆದರಿಸುವ ಹೆಚ್ಚುತ್ತಿರುವ ಪಿಡುಗನ್ನು” ನಿಲ್ಲಿಸಲು ನ್ಯಾಯಾಲಯವು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ