ನವದೆಹಲಿ : ಕ್ಯಾಬ್ ಕಂಪನಿ ಓಲಾ ಮತ್ತು ಉಬರ್ ಎರಡೂ ಒಟ್ಟಿಗೆ ವಿಲೀನಗೊಳ್ಳಬಹುದು ಎಂಬ ಚರ್ಚೆ ನಡೆದಿದೆ. ಆದ್ರೆ, ಈ ವರದಿಗಳು ಬಲಗೊಳ್ಳುವ ಮೊದಲೇ ಓಲಾ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್, ಅಂತಹ ಯಾವುದೇ ಮಾತುಕತೆ ನಡೆದಿಲ್ಲ, ವಿಲೀನವಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭವಿಶ್ ಅಗರ್ವಾಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ಇದೆಲ್ಲವೂ ಸಂಪೂರ್ಣವಾಗಿ ಅಸಂಬದ್ಧ ಎಂದು ಬರೆದಿದ್ದಾರೆ. “ನಮ್ಮದು ಲಾಭ ಗಳಿಸುವ ಕಂಪನಿಯಾಗಿದ್ದು, ಇದೀಗ ನಮ್ಮ ಬೆಳವಣಿಗೆ ಉತ್ತಮವಾಗಿ ಸಾಗುತ್ತಿದೆ. ಬೇರೆ ಯಾವುದೇ ಕಂಪನಿಯು ಮಾರುಕಟ್ಟೆಯನ್ನ ಬಿಡಲು ಬಯಸಿದರೆ, ಅದು ಸ್ವಾಗತಾರ್ಹ. ನಾವು ಎಂದಿಗೂ ಯಾವುದೇ ಕಂಪನಿಯೊಂದಿಗೆ ವಿಲೀನಗೊಳ್ಳುವುದಿಲ್ಲ” ಎಂದಿದ್ದಾರೆ.