ಬಿರ್ಭೂಮ್ : ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -60ರಲ್ಲಿ ಮಂಗಳವಾರ ಮಧ್ಯಾಹ್ನ ಆಟೋರಿಕ್ಷಾ ಮತ್ತು ರಾಜ್ಯ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಹಿಳಾ ಕೃಷಿ ಕಾರ್ಮಿಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಂಪುರಹತ್ ಬಳಿಯ ಮಲ್ಲಾರ್ಪುರದಲ್ಲಿ ಈ ಘಟನೆ ನಡೆದಿದ್ದು, ಕಿಕ್ಕಿರಿದ ಆಟೋರಿಕ್ಷಾವು ದಕ್ಷಿಣ ಬಂಗಾಳ ರಾಜ್ಯ ಸಾರಿಗೆ ನಿಗಮದ (SBSTC) ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಎಂಟು ಮಹಿಳೆಯರು ತ್ರಿಚಕ್ರ ವಾಹನದ ಪ್ರಯಾಣಿಕರು ಮತ್ತು ಒಂಬತ್ತನೇ ಬಲಿಪಶು ಅದರ ಚಾಲಕ ಎಂದು ಬಿರ್ಭುಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ನಾಥ್ ತ್ರಿಪಾಠಿ ತಿಳಿಸಿದ್ದಾರೆ. ಇನ್ನು ಮಹಿಳೆಯರು ಭತ್ತದ ಗದ್ದೆಯಿಂದ ಮನೆಗೆ ಮರಳುತ್ತಿದ್ದರು ಎಂದು ಅವರು ಹೇಳಿದರು.
ಮೃತರ ದೇಹಗಳನ್ನ ಅರಾಮ್ ಬಾಗ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಂದ್ಹಾಗೆ, ಬಸ್ ಅರಂಬಾಗ್ʼನಿಂದ ದುರ್ಗಾಪುರಕ್ಕೆ ತೆರಳುತ್ತಿದ್ದಾಗ ಡಿಕ್ಕಿ ಸಂಭವಿಸಿದೆ.