ಸಾಂಬಾ : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಾಖ್ನ ಗಡಿ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ಗುಂಪು (SOG) ಭಾನುವಾರ ಶೋಧ ಕಾರ್ಯಾಚರಣೆ ನಡೆಸಿತು. ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಕಾರ, ಗ್ರಾಮಸ್ಥರು ಇಲ್ಲಿ ಸಂಭಾವ್ಯ ಡ್ರೋನ್ ಬಗ್ಗೆ ಮಾಹಿತಿ ನೀಡಿದ ನಂತ್ರ ಶೋಧ ಪ್ರಾರಂಭಿಸಲಾಯಿತು.
“ಪಾಕಿಸ್ತಾನವು ಸಾಂಬಾದಲ್ಲಿ ಮತ್ತೊಂದು ಡ್ರೋನ್ ಪಿತೂರಿ ನಡೆಸಿದೆ. ಡ್ರೋನ್’ನ ಸಂಭಾವ್ಯ ವೀಕ್ಷಣೆಯ ಬಗ್ಗೆ ಗ್ರಾಮಸ್ಥರಿಂದ ನಮಗೆ ಮಾಹಿತಿ ಸಿಕ್ಕಿತು; ಸದ್ಯ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಎಸ್ಒಜಿಯ ಡಿಎಸ್ಪಿ ಘರು ರಾಮ್ ಹೇಳಿದ್ದಾರೆ.
“ರಕ್ಷಣಾ ಮೂಲಗಳ ಪ್ರಕಾರ, ಪಾಕಿಸ್ತಾನದಿಂದ ಡ್ರೋನ್ ಶನಿವಾರ ಸಂಜೆ ಭಾರತದ ಭೂಪ್ರದೇಶವನ್ನ ಪ್ರವೇಶಿಸಿದ್ದು, ಇದು ಸ್ಥಳೀಯರು ಮತ್ತು ಭದ್ರತಾ ಪಡೆಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು” ಎಂದು ಅವರು ಹೇಳಿದರು.
ಸಾಂಬಾ ಸೆಕ್ಟರ್’ನಲ್ಲಿ ಗಡಿ ಗ್ರಾಮ ಸಾರಥಿ ಕಲಾನ್’ನಲ್ಲಿ ಡ್ರೋನ್ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದರು. ನಂತ್ರ ಡ್ರೋನ್ ಚಕ್ ದುಲ್ಮಾದಿಂದ ಪಾಕಿಸ್ತಾನದ ಹೈದರ್ ಪೋಸ್ಟ್ಗೆ ಮರಳಿತು, ಹೊಳೆಯುವ ಬಿಳಿ ಬೆಳಕಿನೊಂದಿಗೆ ಡೇರಾ ಮತ್ತು ಮದೂನ್ ಗ್ರಾಮಗಳ ಮೂಲಕ ಹಾದುಹೋಯಿತು ಎನ್ನಲಾಗ್ತಿದೆ.