ತುಮಕೂರು : ತುಮಕೂರಿನ ಸಿದ್ದಗಂಗಾ ಮಠದ 10 ನೇ ತರಗತಿ ವಿದ್ಯಾರ್ಥಿ ನಾಪತ್ತೆಯಾಗಿದ್ದು, ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
BIGG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಮತ್ತೆ ಹೋಟೆಲ್ ತಿಂಡಿ, ಊಟ ದರ ಏರಿಕೆ
ಸಿದ್ದಗಂಗಾ ಮಠದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದೀಪ್ ರಮೇಶ್ ರಾಥೋಡ್ (16) ಅಕ್ಟೋಬರ್ 30 ರಂದು ನಾಪತ್ತೆಯಾಗಿದ್ದು, ವಿದ್ಯಾರ್ಥಿ ಸಂದೀಪ್ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲೂಕಿನ ಕೋಳೂರು ತಾಂಡ ನಿವಾಸಿ. ಮಗ ಸಂದೀಪ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಂದೆ ರಮೇಶ್ ತುಮಕೂರು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.