ಮೆಕ್ಸಿಕೊ : ಮಧ್ಯ ಮೆಕ್ಸಿಕೊದ ಇರಾಪುವಾಟೊದಲ್ಲಿರುವ ಬಾರ್ ಒಂದರಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ. ಪೊಲೀಸರು ಶೂಟರ್’ಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಮಧ್ಯ ಮೆಕ್ಸಿಕನ್ ನಗರ ಇರಾಪುವಾಟೊದ ಬಾರ್ ಒಂದರಲ್ಲಿ ಶನಿವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಆರು ಮಹಿಳೆಯರು ಮತ್ತು ಆರು ಪುರುಷರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರನ್ನು ಹೊರತುಪಡಿಸಿ, ಇನ್ನೂ ಮೂವರು ಗಾಯಗೊಂಡಿದ್ದಾರೆ.
ಮೋಟರ್ಸೈಕಲ್ ಪಕ್ಕದಲ್ಲಿ ಒಬ್ಬ ಬಲಿಪಶುವಿನ ಶವವು ಹೊರಗೆ ಪತ್ತೆಯಾಗಿದ್ದರೆ, ಉಳಿದವರು ಬಾರ್ನೊಳಗೆ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಲ್ಲೆಕೋರರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.