ಬೆಂಗಳೂರು : ಸಣ್ಣ, ಮಧ್ಯಮ ಕಾಫಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರೈತರ ಪಂಪ್ಸೆಟ್ಗಳ ವಿದ್ಯುತ್ ಶುಲ್ಕ ಮರುಪಾವತಿಗೆ ಆದೇಶ ಹೊರಡಿಸಿದೆ.
ಹೌದು, ರೈತರ ಪಂಪ್ಸೆಟ್ಗಳ ವಿದ್ಯುತ್ ಶುಲ್ಕ ಮರುಪಾವತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸಣ್ಣ, ಮಧ್ಯಮ ಕಾಫಿ ಬೆಳೆಗಾರರ ಶುಲ್ಕ ಮರುಪಾವತಿಯಾಗಲಿದೆ.
ಅದ್ರಂತೆ, 10 ಹೆಚ್ಪಿವರೆಗಿನ ಪಂಪ್ಸೆಟ್ಗಳ ಶುಲ್ಕ ಮರುಪಾವತಿ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು, ನಿರಾವರಿ ಪಂಪ್ಸೆಟ್ಗಳ ವಿದ್ಯುತ್ ಶುಲ್ಕ ಮರು ಪಾವತಿ ಮಾಡಲು ನಿರ್ಧರಿಸಿದೆ. ಇನ್ನು ನಿಬಂಧನೆಗಳಿಗೊಳಪಟ್ಟು ಡಿಬಿಟಿ ವ್ಯವಸ್ಥೆಯಡಿ ಜುಲೈ 1ರಿಂದ ವಿದ್ಯುತ್ ಬಳಕೆ ಅನ್ವಯವಾಗುವಂತೆ ಮರು ಪಾವತಿ ಮಾಡಲಾಗುವುದು.