ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಿಂದ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೈಸ್ ಜೆಟ್ ವಿಮಾನ ಎಸ್ಜಿ -306 ಕೋಝಿಕ್ಕೋಡ್ಗೆ ಹಾರುತ್ತಿದ್ದಾಗ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೊಚ್ಚಿಯಲ್ಲಿ ಇಳಿಯಲು ತಿರುಗಿಸಲಾಯಿತು. ಇನ್ನು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.
ಇಂದು ಸಂಜೆ 6.27ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನ ಘೋಷಿಸಲಾಗಿದೆ. ಸಂಜೆ 7.19 ಕ್ಕೆ ವಿಮಾನ ಸುರಕ್ಷಿತವಾಗಿ ಇಳಿಯಿತು, ನಂತ್ರ ತುರ್ತು ಸ್ಥಿತಿಯನ್ನ ಹಿಂತೆಗೆದುಕೊಳ್ಳಲಾಯಿತು.
Chanakya niti: ನಿಜವಾದ ಸ್ನೇಹಿತ ಹೇಗಿರಬೇಕು, ಈ ಬಗ್ಗೆ ಚಾಣಕ್ಯ ಸಲಹೆಗಳನ್ನು ತಿಳಿಯಿರಿ
Indian Calendar 2023 : ‘2023’ರಲ್ಲಿ ಬರುವ ಪ್ರಮುಖ ದಿನ, ಹಬ್ಬ & ರಜಾ ದಿನಗಳ ಮಾಹಿತಿ ಇಲ್ಲಿದೆ