ಗೋವಾ : ನಟಿ ಮತ್ತು ರಾಜಕಾರಣಿ ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವ್ರ ಸಾವಿಗೆ ಮನರಂಜನಾ ಮಾದಕ ದ್ರವ್ಯ ಮೆಥಾಂಫೆಟಮೈನ್ ಕಾರಣ ಎನ್ನುವುದು ಗೊತ್ತಾಗಿದೆ.
ಸೋನಾಲಿ ಫೋಗಟ್ ಅವ್ರಿಗೆ ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಮನರಂಜನಾ ಮಾದಕ ದ್ರವ್ಯ ಮೆಥಾಂಫೆಟಮೈನ್ ನೀಡಿದ್ದಾರೆ ಎಂದು ಗೋವಾ ಪೊಲೀಸರು ಆಗಸ್ಟ್ 27ರಂದು ಬಹಿರಂಗ ಪಡಿಸಿದ್ದಾರೆ.
“ಆರೋಪಿ ಸುಧೀರ್ ಸಾಂಗ್ವಾನ್ ಬಹಿರಂಗಪಡಿಸಿದ ಆಧಾರದ ಮೇಲೆ ಸೋನಾಲಿ ಫೋಗಟ್ʼಗೆ ನೀಡಲಾದ ಮಾದಕವಸ್ತುಗಳನ್ನ ಕರ್ಲೀಸ್ ರೆಸ್ಟೋರೆಂಟ್ನ ವಾಶ್ ರೂಂನಿಂದ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್ʼನ್ನ ಮೆಟಾಮೆಂಫಟಮೈನ್ ಎಂದು ಗುರುತಿಸಲಾಗಿದೆ” ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಂಜುನಾ ಪೊಲೀಸರು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.