ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು. ಕಳೆದ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ವಶದಲ್ಲಿದ್ದ ಐವರು ಮೀನುಗಾರರು ಸೇರಿದಂತೆ ಆರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಅವರಲ್ಲಿ ಆರು ಮಂದಿ ತಮ್ಮ ಶಿಕ್ಷೆಯನ್ನ ಪೂರ್ಣಗೊಳಿಸಿದ್ದರು. ದೇಶಕ್ಕೆ ಮರಳುವಂತೆ ಭಾರತದ ಮನವಿಯ ಹೊರತಾಗಿಯೂ, ಅವ್ರನ್ನ ಕಾನೂನುಬಾಹಿರವಾಗಿ ಬಂಧಿಸಲಾಗಿತ್ತು ಎಂದಿದ್ದಾರೆ.
Human rights of people of Xinjiang province of China should be respected: MEA spokesperson Arindam Bagchi https://t.co/0o3nOwCQbL
— ANI (@ANI) October 7, 2022
ಪಾಕಿಸ್ತಾನದಲ್ಲಿ ಭಾರತೀಯ ಖೈದಿಗಳ ಬಂಧನದಲ್ಲಿ ಅವ್ರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಅವ್ರು ಹೇಳಿದರು. ಭಾರತೀಯ ಖೈದಿಗಳ ಸುರಕ್ಷತೆಯ ವಿಷಯವನ್ನ ಇಸ್ಲಾಮಾಬಾದ್’ನಲ್ಲಿರುವ ನಮ್ಮ ಹೈಕಮಿಷನ್ ಪದೇ ಪದೇ ಎತ್ತಿದೆ. ಎಲ್ಲಾ ಭಾರತೀಯ ಕೈದಿಗಳನ್ನ ತಕ್ಷಣವೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಬೇಕು ಎಂಬುದು ಪಾಕಿಸ್ತಾನ ಸರ್ಕಾರಕ್ಕೆ ಮಾಡಿದ ಮನವಿಯಾಗಿದೆ.
ಚೀನಾ ವಿಷಯದ ಬಗ್ಗೆ ಹೀಗೆ ಹೇಳಿದರು.!
ಚೀನಾದೊಂದಿಗಿನ ಎಲ್ಎಸಿ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಎಲ್ಎಸಿಯಲ್ಲಿ ಹಿಂತೆಗೆದುಕೊಳ್ಳುವ ಕ್ರಮಗಳು ಇನ್ನೂ ಆ ಸ್ಥಾನವನ್ನ ತಲುಪಿಲ್ಲ ಎಂದು ಹೇಳಿದರು. ಇನ್ನು ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಹೇಳುವುದು ಸರಿಯಲ್ಲ. ಕೆಲವು ಸಕಾರಾತ್ಮಕ ಹೆಜ್ಜೆಗಳು ಬಂದಿವೆ, ಆದರೆ ಕೆಲವು ಹಂತಗಳು ಇನ್ನೂ ಉಳಿದಿವೆ ಎಂದರು.