ಶಿರಾಜ್ : ದಕ್ಷಿಣ ನಗರವಾದ ಶಿರಾಜ್’ನ ಪ್ರಮುಖ ಶಿಯಾ ಪವಿತ್ರ ಸ್ಥಳದಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಾಂಗದ ಅಧಿಕೃತ ವೆಬ್ಸೈಟ್, ಇಬ್ಬರು ಬಂದೂಕುಧಾರಿಗಳನ್ನ ಬಂಧಿಸಲಾಗಿದೆ ಮತ್ತು ಮೂರನೆಯವನು ಪರಾರಿಯಾಗಿದ್ದಾನೆ ಎಂದು ಹೇಳಿದೆ.
ಅಂದ್ಹಾಗೆ, ಸರ್ಕಾರಿ ಸ್ವಾಮ್ಯದ ಐಆರ್ ಎನ್ ಎ ಸುದ್ದಿ ಸಂಸ್ಥೆ ಸಾವಿನ ಸಂಖ್ಯೆಯನ್ನುವರದಿ ಮಾಡಿದೆ.
ಸುನ್ನಿ ಉಗ್ರಗಾಮಿಗಳು ಈ ಹಿಂದೆ ದೇಶದ ಶಿಯಾ ಬಹುಸಂಖ್ಯಾತರ ಪವಿತ್ರ ಸ್ಥಳಗಳನ್ನ ಗುರಿಯಾಗಿಸಿಕೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸರ್ಕಾರ ವಿರೋಧಿ ಪ್ರದರ್ಶನಗಳಿಂದ ಇರಾನ್ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.