ಬೆಂಗಳೂರು : ಬೆಂಗಳೂರಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಹಲವೆಡೆ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಮಳೆಯಿಂದಾಗಿ ವಾಹನಗಳು ಓಡಾಟಕ್ಕೆ ತೊಂದರೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾದೇವಪುರ, ಬೊಮ್ಮನಹಳ್ಳಿ, ಕೆ.ಆರ್. ಪುರಂ, ಮಂಡೂರು ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ ಎಂದು ಕೆ.ಆರ್. ಪುರಂ ಡಿಡಿಪಿಐ ಮಾಹಿತಿ ನೀಡಿದ್ದಾರೆ.
ಸರ್ಜಾಪುರ, ಮಾರತ್ತಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ. ರೈನ್ ಬೋ ಡ್ರೈವ್ ಲೇಔಟ್ ವ್ಯಾಪ್ತಿಯಲ್ಲೂ ನೀರು ತುಂಬಿ ಹರಿಯುತ್ತಿದ್ದು, ರೈನ್ ಬೋ ಡ್ರೈವ್ ಲೇಔಟ್, ಸನ್ನಿಬ್ರೋಕ್ ಲೇಔಟ್, ಸರ್ಜಾಪುರ, ಮಾರತ್ತಹಳ್ಳಿ ಔಟರ್ ರಿಂಗ್ ರಸ್ತೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಮಾರತಹಳ್ಳಿ ಮುಖ್ಯ ರಸ್ತೆಯಲ್ಲೂ ನೀರು ತುಂಬಿ ಜನರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ,
BIGG NEWS : ರಾಜ್ಯಾದ್ಯಂತ ಮುಂದುವರೆದ ವರುಣಾರ್ಭಟ : ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ, ಜನಜೀವನ ಅಸ್ತವ್ಯಸ್ಥ