ಕೆಎನ್ಎನ್ಡಿಜಿಟಲ್ ಡೆಸ್ಕ್ : ಪತ್ರಾ ಚಾಲ್ ಭೂಹಗರಣ ಪ್ರಕರಣದಲ್ಲಿ ಬಂಧಿಯಾಗಿರುವ ಶಿವಸೇನೆ ನಾಯಕ ಸಂಜಯ್ ರಾವತ್ ನ್ಯಾಯಾಂಗ ಬಂಧನವನ್ನ ನ್ಯಾಯಾಲಯ ಅಕ್ಟೋಬರ್ 17 ರವರೆಗೆ ವಿಸ್ತರಿಸಿದೆ.
Patra Chawl land scam case | Judicial custody of Shiv Sena leader Sanjay Raut extended till 17th October pic.twitter.com/ctSgqEzC3N
— ANI (@ANI) October 10, 2022
ರಾವತ್ ಅವ್ರನ್ನ ಬಾಂಬೆ ಸೆಷನ್ಸ್ ಕೋರ್ಟ್ ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೈಲಿನಲ್ಲಿರುವ ಸಂಜಯ್ ರಾವುತ್ ಅವ್ರ ಜಾಮೀನು ಅರ್ಜಿಯ ವಿಚಾರಣೆ ಇಂದು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಅಂದ್ಹಾಗೆ, ಇಡಿ ಜುಲೈ 31ರಂದು ರವಾತ್ರನ್ನ ಪತ್ರಾಚಲ್ ಮರು ಅಭಿವೃದ್ಧಿ ಯೋಜನೆಯಲ್ಲಿ ಹಣಕಾಸಿನ ಹಗರಣ ನಡೆಸಿದ್ದಾರೆ ಎಂದು ಆರೋಪದಲ್ಲಿ ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಮೇಲ್ ಹಗರಣ ಪ್ರಕರಣದಲ್ಲಿ ಸಂಜಯ್ ರಾವತ್ ವಿರುದ್ಧ ಇಡಿ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ 1039 ಕೋಟಿ ರೂಪಾಯಿ ದುರುಪಯೋಗದಲ್ಲಿ ರಾವತ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.