ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದ್ದ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಇಂದು ಬೆಳಗ್ಗೆ ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಮಾಡಲಾಗಿದೆ.
BIGG NEWS : ಗಡಿ ಗದ್ದಲದ ನಡುವೆಯೂ ನಾಳೆ ಬೆಳಗಾವಿಯಲ್ಲಿ `ಮಹಾ ಮೇಳಾವ್’ : `ಮಹಾ’ ಸಂಸದ ಮಾನೆ ಭಾಗಿ!
ಕಳೆದ 13 ದಿನಗಳ ಹಿಂದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚೌಕಿ ನಿರ್ಮಾಣ ಮಾಡಲಾಗಿತ್ತು. ರಸ್ತೆ ಸಂಚಾರಕ್ಕೆ ಧಕ್ಕೆಯಾಗಲಿದೆ ಎನ್ನುವ ಕಾರಣ ನೀಡಿ ರಾಯಣ್ಣ ಚೌಕಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳ ನಡೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೀಗ ಗ್ರಾಮಸ್ಥರ ವಿರೋಧದ ನಡುವೆ ಪೊಲೀಸರು ಸರ್ಪಗಾವಲಿನಲ್ಲಿ ಚೌಕಿನ ತೆರವುಗೊಳಿಸಲಾಗಿದೆ. ಶ್ರವಣೂರು ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಗ್ರಾಮದಲ್ಲಿ 400 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.