ಬೆಂಗಳೂರು : ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಕೋಟಿಗೋಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದರಾಗಿದ್ದ ಗಂಡಸಿ ನಾಗರಾಜ್ ಅವರು, ಸರ್ವರ್ ಸೋಮಣ್ಣ, ಸೂಪರ್ ನನ್ ಮಗ, ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀ ಮಂಜುನಾಥ, ರಾಜಾಹುಲಿ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ನಾಗರಾಜ್ ಅವರು ನಿನ್ನೆ ರಾತ್ರಿ 10.30 ರ ಸುಮಾರಿಗೆ ನಿಧನರಾಗಿದ್ದಾರೆ.
BIGG NEWS: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ