ನವದೆಹಲಿ : ಸಭೆಯಲ್ಲಿ ಗದ್ದವೆಬ್ಬಿಸಿದ ಆರೋಪದ ಮೇಲೆ ನಾಲ್ವರು ಕಾಂಗ್ರೆಸ್ ಸಂಸದರನ್ನ ಇಡೀ ಅಧಿವೇಶನಕ್ಕೆ ಅಮಾನತ್ತುಗೊಳಿಸಿ ಸಭಾಪತಿ ಆದೇಶ ಹೊರಡಿಸಿದ್ದಾರೆ. ಇನ್ನು ಲೋಕಸಭೆಯಲ್ಲಿ ಗದ್ದಲ ಮುಂದುವರೆದ ಪರಿಣಾಮ ಕಲಾಪವನ್ನ ನಾಳೆಗೆ ಮುಂದೂಡಲಾಗಿದೆ.
ಹೌದು, ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಘೋಷಣೆಗಳ ನಂತ್ರ ನಾಲ್ವರು ಕಾಂಗ್ರೆಸ್ ಸಂಸದರನ್ನ ಸೋಮವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಅದ್ರಂತೆ, ಮಾಣಿಕಮ್ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿ.ಎನ್.ಪ್ರತಾಪನ್ ಈ ನಾಲ್ವರು ಕಾಂಗ್ರೆಸ್ ಸಂಸದರು ಎಂದು ಎಎನ್ಐ ವರದಿ ಮಾಡಿದೆ.
Four Congress Lok Sabha MPs including Manickam Tagore, Ramya Haridas, Jothimani and TN Prathapan suspended for the entire Monsoon session pic.twitter.com/p2qb2oKshf
— ANI (@ANI) July 25, 2022
ಅಂದ್ಹಾಗೆ, ಬೆಲೆ ಏರಿಕೆ ಮತ್ತು ಜಿಎಸ್ಟಿ ದರ ಏರಿಕೆಯ ವಿಷಯಗಳು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹಲವಾರು ಮುಂದೂಡಿಕೆಗಳಿಗೆ ಕಾರಣವಾಗಿದೆ.