ಬಾರಾ ನಗರ; ನೇಪಾಳದ ಬಾರಾ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, 16 ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ಅಪಘಾತದಲ್ಲಿ 24 ಜನರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೇಪಾಳ ಪೊಲೀಸರು ಈ ಬಗ್ಗೆ ಅದೇ ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗುತ್ತಿದೆ.
Nepal | At least 16 dead, 24 injured in a road accident in Bara District, say police.
— ANI (@ANI) October 6, 2022
ಇದಕ್ಕೂ ಮುನ್ನ ಅಕ್ಟೋಬರ್ 3ರಂದು ನೇಪಾಳದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟು, 36 ಮಂದಿ ಗಾಯಗೊಂಡಿದ್ದರು. ಹೆತೌಬಾ ಸಬ್ ಮೆಟ್ರೋಪಾಲಿಟನ್ ಸಿಟಿ -15 ಗೆ ಹೊಂದಿಕೊಂಡಿರುವ ಪೂರ್ವ-ಪಶ್ಚಿಮ ಹೆದ್ದಾರಿಯ ಚೂಡಿಯಾಮೈ ದೇವಾಲಯದ ಬಳಿ ಈ ಅಪಘಾತ ಸಂಭವಿಸಿತ್ತು.
ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಇತರ 36 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ರಾತ್ರಿ ಬಸ್ ಕಠ್ಮಂಡುವಿನಿಂದ ಝಪಾಗೆ ಹೋಗುತ್ತಿತ್ತು.