ಲಂಡನ್ : ಭಾರತೀಯ ಮೂಲದ ರಿಷಿ ಸುನಕ್ ಅವ್ರು ಬ್ರಿಟನ್ನ ಹೊಸ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಇನ್ನಿದಕ್ಕೂ ಮೊದಲು, ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಪರ್ಧೆಯಿಂದ ಪೆನ್ನಿ ಮೊರ್ಡಾಂಟ್ ಹಿಂದೆ ಸರಿದ್ರು. ಈ ಮೂಲಕ ಮಾಜಿ ಹಣಕಾಸು ಸಚಿವ ಸುನಕ್ (42) ಅವ್ರನ್ನ ಕನ್ಸರ್ವೇಟಿವ್ ಪಕ್ಷದ 357 ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಸದರು ಬೆಂಬಲಿಸುವ ಮೂಲಕ ಭರ್ಜರಿಯಾಗಿ ಗೆಲ್ಲಿಸಿದ್ರು.
ಅಕ್ಟೋಬರ್ 28 ರಂದು ರಿಷಿ ಸುನಕ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅಕ್ಟೋಬರ್ 29ರಂದು ಸಚಿವ ಸಂಪುಟ ನೇಮಕವಾಗಲಿದೆ.
ಬ್ರಿಟನ್ನಿನ ಮೊದಲ ಹಿಂದೂ ಪ್ರಧಾನಿ
ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಯುನೈಟೆಡ್ ಕಿಂಗ್ಡಮ್ನ ಮೊದಲ ಹಿಂದೂ ಮತ್ತು ಬಿಳಿಯೇತರ ಪ್ರಧಾನ ಮಂತ್ರಿಯಾಗಲಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರಿಟಿಷ್ ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನ ವಹಿಸಿಕೊಳ್ಳುವ ಸಾಧ್ಯತೆಗಳು ಬಲವಾಗಿವೆ. ಯುನೈಟೆಡ್ ಕಿಂಗ್ಡಂನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನಂತ್ರ, ಸುನಕ್ ಕನ್ಸರ್ವೇಟಿವ್ ಪಕ್ಷದ ಪ್ರಧಾನ ಕಚೇರಿಗೆ ತೆರಳಿದರು. ಅಲ್ಲಿ ಅವರನ್ನ ಇತರ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು.
ಅಭಿನಂದನೆ ಸಲ್ಲಿಸಿದ ಲಿಜ್ ಟ್ರಸ್
ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರು ರಿಷಿ ಸುನಕ್ ಅವರನ್ನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಯುಕೆ ಪ್ರಧಾನಿಯಾಗಿ ನೇಮಕ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ. “ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ನಮ್ಮ ಮುಂದಿನ ಪ್ರಧಾನಿಯಾಗಿ ನೇಮಕಗೊಂಡಿರುವ ರಿಷಿ ಸುನಕ್ ಅವರಿಗೆ ಅಭಿನಂದನೆಗಳು. ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದಿದ್ದಾರೆ.