ಕೆಎನ್ಎನ್ಡಿಜಿಟಲ್ ಡೆಸ್ಕ್ : ರಿಷಿ ಸುನಾಕ್ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ತಿದ್ದಂತೆ ಲಿಜ್ ಟ್ರಸ್ ಅವ್ರ ಸಂಪುಟದ ಹಲವು ಸಚಿವರಿಗೆ ಗೇಟ್ ಪಾಸ್ ನೀಡಿದ್ದಾರೆ. ಇನ್ನು ಡೊಮಿನಿಕ್ ರಾಬ್ ಅವರನ್ನ ಬ್ರಿಟನ್ನ ಉಪ ಪ್ರಧಾನಮಂತ್ರಿ ಮತ್ತು ನ್ಯಾಯಾಂಗ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.
The Rt Hon Dominic Raab MP @DominicRaab has been appointed Deputy Prime Minister, Lord Chancellor, and Secretary of State for Justice @MoJGovUK. #Reshuffle pic.twitter.com/aikeZwQ1rH
— UK Prime Minister (@10DowningStreet) October 25, 2022
ಇನ್ನು ರಿಷಿ ಇಲ್ಲಿಯವರೆಗೆ ನಾಲ್ವರು ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಇವರಲ್ಲಿ ವಾಣಿಜ್ಯ ಕಾರ್ಯದರ್ಶಿ ಜಾಕೋಬ್ ರೀಸ್–ಮೊಗ್, ನ್ಯಾಯಾಂಗ ಕಾರ್ಯದರ್ಶಿ ಬ್ರಾಂಡನ್ ಲೂಯಿಸ್, ಕೆಲಸ ಮತ್ತು ಪಿಂಚಣಿ ಕಾರ್ಯದರ್ಶಿ ಕ್ಲೋಯ್ ಸ್ಮಿತ್ ಮತ್ತು ಅಭಿವೃದ್ಧಿ ಸಚಿವ ವಿಕ್ಕಿ ಫೋರ್ಡ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ಜೆರೆಮಿ ಹಂಟ್ ಅವರು ಹಣಕಾಸು ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಧಾನಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.