ನವದೆಹಲಿ : ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿಯನ್ನ ನೀಡಲಾಗಿದೆ.
Tarun Bajaj, Secretary, Department of Revenue, Ministry of Finance given additional charge of the post of Secretary, Ministry of Corporate Affairs.
— ANI (@ANI) August 22, 2022
ಅಂದ್ಹಾಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರಿಗೆ ರಾಜೇಶ್ ವರ್ಮಾ ಅವರನ್ನ ರಾಷ್ಟ್ರಪತಿ ಭವನದ ಕಾರ್ಯದರ್ಶಿಯಾಗಿ ನೇಮಿಸಿದ ಕೆಲವು ದಿನಗಳ ನಂತ್ರ ತರುಣ್ ಬಜಾಜ್ ಅವ್ರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಬಜಾಜ್ ಅವರು ಮೂರು ದಶಕಗಳಿಗೂ ಹೆಚ್ಚು ಅನುಭವವನ್ನ ಹೊಂದಿದ್ದು, ಪ್ರಾಥಮಿಕವಾಗಿ ಸರ್ಕಾರಕ್ಕಾಗಿ ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಈ ಹಿಂದೆ, ಆಗಸ್ಟ್ 12 ರವರೆಗೆ ರಜೆಯಲ್ಲಿದ್ದ ಅಜಯ್ ಸೇಠ್ ಅವರನ್ನ ಭರ್ತಿ ಮಾಡಲು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿಯನ್ನ ಬಜಾಜ್ ಅವರಿಗೆ ನೀಡಲಾಗಿತ್ತು.