ಬೆಂಗಳೂರು : ರಾಜ್ಯಾದ್ಯಂತ ಕೆಲ ದಿನಗಳ ಹಿಂದ ಅವಾಂತರ ಸೃಷ್ಟಿಸಿದ್ದ ಮಳೆ ಮತ್ತೆ ಶುರುವಾಗಿದ್ದು, ಬೆಂಗಳೂರು, ಮೈಸೂರು, ರಾಮನಗರ, ದಾವಣಗೆರೆ,ಚಿತ್ರದುರ್ಗ ಸೇರಿದಂತೆ ಹಲವಡೆ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗಿದ್ದು, ಬೆಂಗಳೂರಿನಲ್ಲಿ ರಾತ್ರಿಯಿಂದ ಮಳೆಯಾಗುತ್ತಿದ್ದು, ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಶಾಂತಿನಗರ, ಬನಶಂಕರಿ, ಜಯನಗರ, ಕೆ.ಆರ್ ಪುರ, ಹಲಸೂರು, ಮೆಜೆಸ್ಟಿಕ್ ಸೇರಿ ನಗರದ ಬಹುತೇಕ ಕಡೆ ಮಳೆಯಾಗಿದ್ದು,ಕಚೇರಿ ಕೆಲಸಕ್ಕೆ ಹೋಗುವವರು ಪರದಾಡುವಂತಾಗಿದೆ.
ಬಾಯ್ಫ್ರೆಂಡ್ಗಾಗಿ ಮಾರಾಮಾರಿ: ಠಾಣೆ ಮೆಟ್ಟಿಲೇರಿದ ಹುಡುಗಿಯರು, ಯುವಕ ಎಸ್ಕೇಪ್!
ದಾವಣಗೆ ಜಿಲ್ಲೆಯಲ್ಲೂ ನಿನ್ನೆ ರಾತ್ರಿಯಿಂದ ಮಳೆಯಾಗುತ್ತಿದ್ದು, ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ ಹಲವೆಡೆ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ ನಗರ ಸೇರಿ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ ಸುರಿದಿದ್ದು, ನಿರಂತರ ಜಡಿ ಮಳೆಯಿಂದ ರೈತರು ಬೆಳೆಹಾನಿ ಭೀತಿಯಲ್ಲಿದ್ದಾರೆ.
ರಾಮನಗರ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ರಾಮಮ್ಮನ ಕೆರೆ ಕೋಡಿ ಬಿದ್ದು ಮನೆಗಳು ಜಲಾವೃತವಾಗಿದ್ದು, 20 ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ಪರದಾಡಿರುವಂತಹ ಘಟನೆ ಬೀಡಿ ಕಾಲೋನಿ, ಆರ್ಎಂಸಿ ಕಾಲೋನಿಯಲ್ಲಿಯೂ ನಡೆದಿದೆ.
BIGG NEWS : ರಾಜ್ಯದಲ್ಲಿ ಆಗಸ್ಟ್ 29 ರಿಂದ `ಗ್ರಾಮೀಣ ಕ್ರೀಡಾಕೂಟ’ : ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ