ನವದೆಹಲಿ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Government of India has decided that there will be one day State Mourning on September 11 throughout India in the wake of demise of Britain's Queen Elizabeth II: Ministry of Home Affairs
— ANI (@ANI) September 9, 2022
ಏತನ್ಮಧ್ಯೆ, ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯ ಏಳನೇ ದಿನದಂದು ಕೊನೆಗೊಳ್ಳುವ ಶೋಕಾಚರಣೆಯ ಅವಧಿಯನ್ನ ಬ್ರಿಟನ್ನ ರಾಜಮನೆತನವು ಆಚರಿಸುತ್ತದೆ, ರಾಜಮನೆತನದ ನಿವಾಸಗಳಲ್ಲಿ ಧ್ವಜಗಳು ಅರ್ಧಮಟ್ಟಕ್ಕೆ ಇಳಿದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.