ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಿ ಮೋದಿ ಸಲಹೆ ಪಾಲನೆಗೆ ರಷ್ಯಾ ಅಧ್ಯಕ್ಷ ಪುಟಿನ್ ಮುಂದಾಗಿದ್ದು, ಉಕ್ರೇನ್ ಮೇಲೆ ಸಾರಿರುವು ಯುದ್ಧಕ್ಕೆ ಅಂತ್ಯವಾಡಲು ಮುಂದಾಗಿದ್ದಾರೆ.
ಈ ಕುರಿತು ರಷ್ಯಾ ಅಧ್ಯಕ್ಷ ಪುಟಿನ್ ಮಾತನಾಡಿದ್ದು, “ರಷ್ಯಾ ಈಗ ಉಕ್ರೇನ್’ನಲ್ಲಿ ಯುದ್ಧವನ್ನ ಕೊನೆಗೊಳಿಸಲು ಬಯಸುತ್ತದೆ. ಆದ್ರೆ, ಇದಕ್ಕಾಗಿ, ರಾಜತಾಂತ್ರಿಕ ಪರಿಹಾರವನ್ನ ಕಂಡುಹಿಡಿಯಬೇಕಾಗಿದೆ. ಇನ್ನು ಈ ಸಂಘರ್ಷವನ್ನ ಕೊನೆಗೊಳಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಪ್ರಯತ್ನಿಸುವುದನ್ನ ಮುಂದುವರಿಸುತ್ತೇವೆ. ಆದ್ದರಿಂದ ಶೀಘ್ರವೇ ಉತ್ತಮ ಸಿಗುವುದು” ಎಂದರು.
ಆದಾಗ್ಯೂ, ಪುಟಿನ್ ಅವರ ಹೇಳಿಕೆಗಳು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ಅನುಮಾನಗಳನ್ನ ಹುಟ್ಟುಹಾಕಿವೆ. ಉಕ್ರೇನ್ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವುದು ಅನಿವಾರ್ಯವಾಗಿ ರಾಜತಾಂತ್ರಿಕ ಪರಿಹಾರವನ್ನ ಒಳಗೊಂಡಿರುತ್ತದೆ ಎಂದು ರಷ್ಯಾ ಅಧ್ಯಕ್ಷರು ಹೇಳಿದರು.
ಅಂದ್ಹಾಗೆ, ಇತ್ತೀಚಿಗಷ್ಟೇ ಪುಟಿನ್ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ಯುದ್ಧ ನಿಲ್ಲಿಸುವಂತೆ ಪುಟಿನ್್ಗೆಾ ಮಾನವಿ ಮಾಡಿದ್ದರು. ಯುದ್ಧದಿಂದ ಪರಿಹಾರ ಅಸಾಧ್ಯ, ಶಾಂತಿಯುತ ಮಾತುಕತೆಗೆ ಸಲಹೆ ನೀಡಿದ್ದು, ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕ್ಳಬೇಕು ಎಂದು ಸಲಹೆ ನೀಡಿದ್ದರು. ಇದರ ಬೆನ್ನೆಲ್ಲೇ ಪುಟಿನ್ ರಾಜತಾಂತ್ರಿಕ ಮಾತುಕತಗೆ ಒಲವು ತೋರಿದ್ದಾರೆ.
BIGG NEWS : ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ : ಸಚಿವ ಆರ್.ಅಶೋಕ್
BIGG NEWS : ಚೀನಾದಲ್ಲಿ ಕೊರೊನಾ ರಣಕೇಕೆ ; ದಿನಕ್ಕೆ 1 ಮಿಲಿಯನ್ ಜನರಿಗೆ ಸೋಂಕು, 5,000 ಮಂದಿ ಸಾವು : ಅಧ್ಯಯನ