ಬೆಂಗಳೂರು: ಇಂದು ಸಂಜೆ ವಿಧಾನಸೌಧದ ಮುಂಭಾಗ ಡಾ.ಪುನೀತ್ರಾಜ್ಕುಮಾರ್ಗೆ ಮರೋಣತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿಯನ್ನು ನಟ, ನಿರ್ಮಾಪಕ, ಗಾಯಕ ಕರ್ನಾಟಕ ರತ್ನ ಪುನೀತ್ ರಾಜ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡ ಗೌರವಿಸಲಾಯಿತು.
ಇದೇ ವೇಳೆ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್ಕುಮಾರ್ ಕುಟುಂಬದ ಸದ್ಯಸರು, ಖ್ಯಾತ ನಟರಾದ ರಜಿನಿಕಾಂತ್, ಜ್ಯೂ.ಎನ್ಟಿಆರ್ ಸೇರಿದಂತೆ ರಾಜಕೀಯ ನಾಯಕರುಗಳು ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕೆ ಸಾವಿರಾರು ಜನತೆ ಆಗಮಿಸಿ ನೆಚ್ಚಿನ ನಟನಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮ ಆಗಮಕ್ಕೂ ಮುನ್ನ ಗಾಯಕರು ನಟ ಪುನೀತ್ ರಾಜ್ಕುಮಾರ್ ಅವರ ಅಭಿನಯದ ಸಿನಿಮಾ ಹಾಡುಗಳನ್ನು ಹಾಡಿದ್ದರು. ಇದೇ ವೇಳೆ ಅಪ್ಪು ಅವರ ಕುರಿತು ಕಿರುಚಿತ್ರವನ್ನು ಕೂಡ ಪ್ರದರ್ಶನ ಮಾಡಿದರು.
ಇದೇ ವೇಳೆ ಮಾತನಾಡಿದ ರಜನಿ ಕಾಂತ್ ಅವರು ಮಾತನಾಡಿ, ಸಿಎಂ ಸಮ್ಮುಖದಲ್ಲಿ ಏಳು ಕೋಟಿ ಕನ್ನಡ ಮಕ್ಕಳಿಗೆ ರಾಜೋತ್ಸವದ ಶುಭಾಶಯಗಳು, ಎಲ್ಲರೂ ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಇರಲಿ ಅಂತ ಮನವಿ ಮಾಡಿಕೊಂಡರು. ಪುನೀತ್ ರಾಜ್ಕುಮಾರ್ ಅವರು ದೇವರ ಮಗು, ನಮ್ಮಲ್ಲಿ ಸ್ವಲ್ಪ ದಿನ ಇದ್ದು, ಅವರ ಆತ್ಮ ಇಲ್ಲದೇ ಇದ್ದು, ಅದು ಬಹಳ ದೊಡ್ಡ ಜೀವ ಮಳೆ ಕಾರಣದಿಂದ ಹೆಚ್ಚು ದಿನ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮುಂದೆ ಒಂದು ದಿನ ಅಪ್ಪು ಅವರ ಬಗ್ಗೆ ಮಾತನಾಡುವೆ ಅಂತ ಹೇಳಿದರು.
ಇದೇ ವೇಳೆ ಮಾತನಾಡಿದ ಜ್ಯೂ. ಎನ್ಟಿಆರ್ ಪರಂಪರೆ ಮತ್ತು ಉಪನಾಮ ಅನ್ನೊದು ಹಿರಿಯರಿಂದ ಬರುತ್ತದೆ ವ್ಯಕ್ತಿತ್ವದ ಅನ್ನೋಂದು ಸ್ವಂತ ಸಂಪಾದನೆ, ಆಹಂ ಇಲ್ಲದೇ, ಯುದ್ದವಿಲ್ಲದೇ ಗೆದ್ದ ರಾಜ ಇದ್ದರೇ ಅದು ಪುನೀತ್ ರಾಜ್ಕುಮಾರ್ ಮಾತ್ರ ಅಂತ ಹೇಳಿದರು. ಅವರ ನಗುವಿನಲ್ಲೂ ಯಾರನ್ನು ಕಾಣಸಲು ಸಾಧ್ಯವಿಲ್ಲ ಅಂತ ಹೇಳಿದರು. ಇನ್ನೂ ಇದೇ ವೇಳೇ ನಾನು ಇಲ್ಲಿಗೆ ಬರಲುಕಾರಣ ಸಾಧನೆ ಕಾರಣದಿಂದ ಅಲ್ಲ ಬದಲಿಗೆ ಪುನೀತ್ ರಾಜ್ಕುಮಾರ್ ಅವರ ಸ್ನೇಹಿತ ಅನ್ನುವ ಕಾರಣದಿಂದ ನನಗೆ ಸಂತೋಶ ಅಂತ ಹೇಳಿದರು. ಕರ್ನಾಟಕ ರತ್ನ ಅಂದ್ರೆ ಅದಕ್ಕೆ ಪುನೀತ್ ಹೆಸರು ಅಂತ ಹೇಳಿದರು.