ನವದೆಹಲಿ : ಭಾರತದಲ್ಲಿ ಇದೇ ಮೊದಲ ಬಾರಿಗೆ, ಭಾರತದಲ್ಲಿ ವ್ಹೀಲ್ ಪ್ಲಾಂಟ್ ನಿರ್ಮಿಸಲು ಮತ್ತು ಹೈಸ್ಪೀಡ್ ರೈಲುಗಳಿಗೆ ಚಕ್ರಗಳನ್ನ ತಯಾರಿಸಲು ಖಾಸಗಿ ಕಂಪನಿಗಳನ್ನ ಆಹ್ವಾನಿಸಲು ರೈಲ್ವೆ ಟೆಂಡರ್ಗಳನ್ನ ಕರೆದಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ತಿಳಿಸಿದ್ದಾರೆ.
‘ಮೇಕ್ ಇನ್ ಇಂಡಿಯಾ’ ಘಟಕವು ಚಕ್ರಗಳ ರಫ್ತುದಾರರಾಗಿರಬೇಕು ಎಂಬ ಷರತ್ತಿನ ಮೇಲೆ ಟೆಂಡರ್ಗಳನ್ನು ನೀಡಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದರು, ರಫ್ತು ಮಾರುಕಟ್ಟೆ ಯುರೋಪ್ ಆಗಿರುತ್ತದೆ ಎಂದು ಹೇಳಿದರು.
18 ತಿಂಗಳೊಳಗೆ ಘಟಕವನ್ನ ಸ್ಥಾಪಿಸಬೇಕು ಎಂದು ಟೆಂಡರ್ನಲ್ಲಿ ಆದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವರು, “ಮೇಕ್ ಇನ್ ಇಂಡಿಯಾ ವ್ಹೀಲ್ ಪ್ಲಾಂಟ್ ಅನ್ನು 18 ತಿಂಗಳಲ್ಲಿ ಸ್ಥಾಪಿಸಲಾಗುವುದು. ವರ್ಷಕ್ಕೆ ₹600 ಕೋಟಿಗೆ 80,000 ಚಕ್ರಗಳನ್ನ ಖರೀದಿಸುವ ಭರವಸೆ ನೀಡಿದರು.
ಭಾರತೀಯ ರೈಲ್ವೆಗೆ ವರ್ಷಕ್ಕೆ ಎರಡು ಲಕ್ಷ ಚಕ್ರಗಳ ಅಗತ್ಯವಿದೆ. ಯೋಜನೆಯ ಪ್ರಕಾರ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ಒಂದು ಲಕ್ಷ ಚಕ್ರಗಳನ್ನ ಒದಗಿಸಿದರೆ, ಉಳಿದವುಗಳನ್ನ ಹೊಸ ‘ಮೇಕ್ ಇನ್ ಇಂಡಿಯಾ’ ಘಟಕದಿಂದ ಒದಗಿಸಲಾಗುವುದು ಎಂದರು.