ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಶನಿವಾರ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದರು. ದೇಶಕ್ಕಾಗಿ ಸೇವೆ ಸಲ್ಲಿಸುವಾಗ ತಮ್ಮ ಐದು ವರ್ಷಗಳ ಅಧಿಕಾರಾವಧಿಯ ಪ್ರಮುಖ ಕ್ಷಣಗಳನ್ನು ಮತ್ತು ಸಾಂಕ್ರಾಮಿಕ ರೋಗದ ಸಮಯದಲ್ಲಿ ಎದುರಿಸಿದ ಹೋರಾಟವನ್ನ ಅವರು ನೆನಪಿಸಿಕೊಂಡರು.
📡LIVE NOW📡
President of India, Shri RamNath Kovind addresses the farewell function in the Central Hall of Parliament.@PMOIndia @narendramodi @rashtrapatibhvn @VPSecretariat @ianuragthakur @Murugan_MoS @PIB_India @DDNewslive @AmritMahotsav https://t.co/LmtJPy9aNy
— Ministry of Information and Broadcasting (@MIB_India) July 23, 2022
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರಿಗೆ ಸಂಸತ್ತಿನ ಸೆಂಟ್ರಲ್ ಹಾಲ್ʼನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಧ್ಯ ಈ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು.
ನಿರ್ಗಮಿತ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿದಾಯದ ಔತಣಕೂಟವನ್ನು ನಡೆಸಿದ ಒಂದು ದಿನದ ನಂತರ ಈ ಭಾಷಣ ಬಂದಿದೆ. ಭಾರತದ 14ನೇ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 2017ರಲ್ಲಿ ಅಧಿಕಾರ ವಹಿಸಿಕೊಂಡರು. ಭಾರತದ 15ನೇ ಅಧ್ಯಕ್ಷರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.