ಚೆನ್ನೈ : ಚಿಯಾನ್ ವಿಕ್ರಮ್ ಅವ್ರಿಗೆ ಇಂದು ಹೃದಯಾಘಾತವಾಗಿದ್ದು, ಸಧ್ಯ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಅವ್ರ ಆರೋಗ್ಯದ ಬಗ್ಗೆ ಆಸ್ಪತ್ರೆ ಮಾಹಿತಿ ನೀಡಬೇಕಿದೆ.
ಅಂದ್ಹಾಗೆ, ತಮ್ಮ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್ʼನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು, ಇದು ಇಂದು ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಬೇಕಿತ್ತು.
ಇನ್ನು ತಮ್ಮ ನೆಚ್ಚಿನ ನಟ ಹೃದಯಾಘಾತದಿಂದ ಆಸ್ಪತ್ರೆ ಸೇರಿರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಒಬ್ಬೊಬ್ಬರಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ಚಿಯಾನ್ ವಿಕ್ರಮ್ ಅಂತಾನೇ ಖ್ಯಾತರಾದ ನಟನ ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ರಾಷ್ಟ್ರಪ್ರಶಸ್ತಿ, ಏಳು ಫಿಲ್ಮ್ಫೇರ್ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು 2004ರಲ್ಲಿ ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದಿದ್ದಾರೆ.