ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ ಎಟಿಎಸ್ ಮತ್ತೊಮ್ಮೆ ದೊಡ್ಡ ಯಶಸ್ಸು ಕಂಡಿದೆ. ಈ ಬಾರಿ ಎಟಿಎಸ್ ಮತ್ತು ಡಿಆರ್ಐ ಕೋಲ್ಕತ್ತಾದಲ್ಲಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ 200 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ದುಬೈನಿಂದ ತರಿಸಲಾಗಿದ್ದ ಜಂಕ್ನೊಳಗೆ ಈ 40 ಕೆಜಿ ಡ್ರಗ್ಸ್ ಅಡಗಿಸಿಟ್ಟಿದ್ದರು.
ಸಿಕ್ಕಿರುವ ಮಾಹಿತಿ ಪ್ರಕಾರ, ದುಬೈನಿಂದ ಜಂಕ್ ಕಂಟೈನರ್ʼಗಳಲ್ಲಿ ತಂದಿದ್ದ ಡ್ರಗ್ಸ್ʼಗಳನ್ನ ಗೇರ್ ಬಾಕ್ಸ್ʼನೊಳಗೆ ಬಚ್ಚಿಟ್ಟಿದ್ದಾರೆ. ಗುಜರಾತ್ ಎಟಿಎಸ್ ಈಗಾಗಲೇ ಈ ವಿಷಯದ ಬಗ್ಗೆ ದೃಢವಾದ ಜ್ಞಾನವನ್ನ ಹೊಂದಿತ್ತು. ದುಬೈನ ಜೆಬೆಲ್ ಅಲಿ ಬಂದರಿನಿಂದ ಶಿಪ್ಪಿಂಗ್ ಕಂಟೈನರ್ನಲ್ಲಿ ಸಾಗಿಸಲಾದ 7,220 ಕೆಜಿ ಲೋಹದ ಸ್ಕ್ರ್ಯಾಪ್ನ ಭಾಗವಾಗಿದ್ದ 12 ಗೇರ್ ಬಾಕ್ಸ್ಗಳಲ್ಲಿ ಡ್ರಗ್ಸ್ ಅಡಗಿಸಿ ಫೆಬ್ರವರಿಯಲ್ಲಿ ಕೋಲ್ಕತ್ತಾ ಬಂದರನ್ನು ತಲುಪಲಾಗಿತ್ತು ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಹೇಳಿದ್ದಾರೆ.
ಪೆಟ್ಟಿಗೆಯನ್ನು ಬಿಳಿ ಶಾಯಿಯಿಂದ ಗುರುತಿಸಲಾಗಿದೆ.!
ಸೆಂಚುರಿ ಕಂಟೈನರ್ ಸರಕು ಸಾಗಣೆ ನಿಲ್ದಾಣದಲ್ಲಿ ಆಪರೇಷನ್ ‘ಗೇರ್ ಬಾಕ್ಸ್’ ನಡೆಸಲಾಯಿತು. ರವಾನೆಯಲ್ಲಿ 7,220 ಕೆಜಿ ಲೋಹದ ಸ್ಕ್ರ್ಯಾಪ್ ಮತ್ತು 36 ಗೇರ್ ಬಾಕ್ಸ್ಗಳಿವೆ. ಈ 36 ಬಾಕ್ಸ್ಗಳಲ್ಲಿ 12 ಬಾಕ್ಸ್ಗಳನ್ನು ಬಿಳಿ ಶಾಯಿಯಿಂದ ಗುರುತಿಸಲಾಗಿದ್ದು, ಅವುಗಳನ್ನ ತೆರೆದಾಗ 72 ಹೆರಾಯಿನ್ ಪ್ಯಾಕೆಟ್ಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಭಾಟಿಯಾ ಹೇಳಿದ್ದು, ಉಳಿದ ಗೇರ್ ಬಾಕ್ಸ್ಗಳನ್ನ ತೆರೆಯಲಾಗುತ್ತಿದೆ.
ಗುಜರಾತ್ ಎಟಿಎಸ್ ನೀಡಿದ ಸುಳಿವಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಗುಜರಾತ್ ಪೊಲೀಸರು ಕೋಸ್ಟ್ ಗಾರ್ಡ್, ಎನ್ಸಿಬಿ, ಪಂಜಾಬ್ ಮತ್ತು ದೆಹಲಿ ಪೊಲೀಸ್ ಮತ್ತು ಇತರ ಏಜೆನ್ಸಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವ್ರು ಹೇಳಿದರು.