ನವದೆಹಲಿ : ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ʼನ್ನ ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. ಇನ್ನು ಇದೇ ವೇಳೆ ಭಾರತೀಯ ನೌಕಾಪಡೆಯ ಹೊಸ ಲಾಂಚನವನ್ನೂ ಅನಾವರಣಗೊಳಿಸಲಿದ್ದಾರೆ ಎಂದು ಪಿಎಂಒ ಮಂಗಳವಾರ ತಿಳಿಸಿದೆ.
ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ʼನಲ್ಲಿ ಐಎನ್ಎಸ್ ವಿಕ್ರಾಂತ್ʼನ್ನ ಪ್ರಧಾನಿ ನಿಯೋಜಿಸಲಿದ್ದು, ಈ ಸಂದರ್ಭದಲ್ಲಿ ಅವ್ರು “ವಸಾಹತುಶಾಹಿ ಗತಕಾಲವನ್ನ ತೊಡೆದು ಹಾಕುವ ಹೊಸ ನೌಕಾ ಎನ್ಸೈನ್ (ನಿಶಾನ್) ಅನಾವರಣಗೊಳಿಸಲಿದ್ದಾರೆ” ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಹೊಸ ಲಾಂಛನವು “ಶ್ರೀಮಂತ ಭಾರತೀಯ ಸಮುದ್ರ ಪರಂಪರೆಗೆ ಸರಿ ಹೊಂದುತ್ತದೆ” ಎಂದು ಪಿಎಂಒ ಹೇಳಿದೆ.