ಬೆಂಗಳೂರು : ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET) 2022 ಫಲಿತಾಂಶವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಅದ್ರಂತೆ, ಅಭ್ಯರ್ಥಿಗಳು KEAಯ ಅಧಿಕೃತ ವೆಬ್ಸೈಟ್ kea.kar.nic.inನಲ್ಲಿ ಪರಿಶೀಲಿಸಬೋದು.
PGCET 2022 ಫಲಿತಾಂಶ ಪರಿಶೀಲಿಸಲು ಈ ಅನುಸರಿಸಿ.!
* ಮೊದಲು ಅಧಿಕೃತ ವೆಬ್ ಸೈಟ್ kea.kar.nic.in ಗೆ ಭೇಟಿ ನೀಡಿ.
* ಮುಖಪುಟದಲ್ಲಿ, ಕರ್ನಾಟಕ PGCET 2022 ಫಲಿತಾಂಶವನ್ನ ಡೌನ್ಲೋಡ್ ಮಾಡಿ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
* ಲಾಗಿನ್ ರುಜುವಾತುಗಳನ್ನ ನಮೂದಿಸಿ.
* ಈಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
* ಭವಿಷ್ಯದ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ ಮತ್ತು ಮುದ್ರಣ ತೆಗೆದುಕೊಳ್ಳಿ.