- ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಪವಿತ್ರಗೌಡರನ್ನು ಬಂಧನ ಮಾಡುವುದಕ್ಕೆ ಮಹಿಳಾ ಪೊಲೀಸರು ಆಗಮಿಸಿ, ಅವರಿಗೆ ನೋಟಿಸ್ ನೀಡಿ ಬಂಧನದ ಪ್ರಕ್ರಿಯೆಯನ್ನು ನಡೆಸಿದರು.
ಇನ್ನೂ ಜಾಮೀನು ರದ್ದಾದ ಬೆನ್ನಲೇ ಪವಿತ್ರಾ ಗೌಡ ಆತ್ಮೀಯರ ಬಳಿಕ ಕಣ್ನೀರಿಟ್ಟ ಘಟನೆ ನಡೆದಿದೆ. ಇನ್ನೂ ಪೊಲೀಸರು ಆದೇಶದ ಪ್ರತಿಯನ್ನು ಕೂಡ ಆರೋಪಿಗೆ ನೀಡಿದ ಬಳಿಕ ಮಹಿಳಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಪವಿತ್ರಾ ಗೌಡರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನಂತರ ಆಕೆಯನ್ನು ಪರಪ್ಪನ ಆಗ್ರಹಾರ ಇಲ್ಲವೇ ಬೇರೆ ಜೈಲಿಗೆ ಬಿಡಲಾಗುವುದು ಎನ್ನಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಲಕ್ಷ್ಮಣ್, ನಾಗರಾಜ್, ಪ್ರದೋಷ್, ಅನು ಕುಮಾರ್ ಮತ್ತು ಜಗದೀಶ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ಈ ಹಿಂಧೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು, ಹಾಗೂ ಜಾಮೀನು ನೀಡಿದ್ದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.
Pavithra Gowda in police custody.