ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಾನ್ಸೂನ್ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದು, ಇತರ 50 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ತಿಳಿಸಿದೆ.
NDMA ಪ್ರಕಾರ, ಕನಿಷ್ಠ 17 ಮಕ್ಕಳು ಮತ್ತು ಏಳು ಮಹಿಳೆಯರು ಸಾವನ್ನಪ್ಪಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 16 ಜನ ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಇನ್ನು ಸಿಂಧ್ʼನಲ್ಲಿ 13 ಸಾವು ಜನ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಒಂದು ಸಾವು ವರದಿಯಾಗಿದೆ ಎಂದು ಎನ್ಡಿಎಂಎ ತಿಳಿಸಿದೆ.
ಜೂನ್ ಮಧ್ಯಭಾಗದಿಂದ ಈ ಋತುವಿನ ಮಾನ್ಸೂನ್ ಮಳೆಯಿಂದ ಪಾಕಿಸ್ತಾನದಲ್ಲಿ ಒಟ್ಟು ಸಾವಿನ ಸಂಖ್ಯೆ 937ಕ್ಕೆ ತಲುಪಿದೆ, ಇದರಲ್ಲಿ 198 ಮಹಿಳೆಯರು ಮತ್ತು 343 ಮಕ್ಕಳು ಸೇರಿದ್ದಾರೆ ಮತ್ತು 1,343 ಇತರರು ಗಾಯಗೊಂಡಿದ್ದಾರೆ ಎಂದು ಎನ್ಡಿಎಂಎ ತಿಳಿಸಿದೆ.