ನವದೆಹಲಿ: ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ಪಿ.ಬಿ.ವರಲೆ ಅವರನ್ನು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸೆಪ್ಟೆಂಬರ್ 30. ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಪದೋನ್ನತಿಯನ್ನು ಶಿಫಾರಸು ಮಾಡಿತ್ತು. ಬಾಂಬೆ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ವರಲೆ ಅವರು 1985ರ ಆಗಸ್ಟ್ ನಲ್ಲಿ ವಕೀಲ ಎಸ್.ಎನ್.ಲೋಯಾ ಅವರ ಬಳಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು 1992 ರವರೆಗೆ ಔರಂಗಾಬಾದ್ ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜುಲೈ 18, 2008 ರಂದು ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿ ಅವರು ನೇಮಕಗೊಂಡರು. ನ್ಯಾಯಮೂರ್ತಿ ವರಲೆ ಅವರು ಬಾಂಬೆ ಹೈಕೋರ್ಟ್ ನಿಂದ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾದ ನಾಲ್ಕನೇ ನ್ಯಾಯಾಧೀಶರಾಗಿದ್ದಾರೆ.