ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕವನ್ನ ಇನ್ನಷ್ಟು ಪಾರದರ್ಶಕಗೊಳಿಸಬೇಕೆಂಬ ಬೇಡಿಕೆಯ ಕುರಿತು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಚುನಾವಣಾ ಆಯುಕ್ತರ ಆಯ್ಕೆ ಕಾರ್ಯವನ್ನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಎಷ್ಟು ಪ್ರಬಲರಾಗಿರಬೇಕು ಎಂದರೆ ನಾಳೆ ಪ್ರಧಾನಿಯವರ ಮೇಲೂ ಯಾವುದೇ ತಪ್ಪಿನ ಆರೋಪ ಬಂದ್ರೆ ಅವರು ತಮ್ಮ ಜವಾಬ್ದಾರಿಯನ್ನ ನಿಭಾಯಿಸಬಹುದು ಎಂದು ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ಕೇವಲ ಕಾಲ್ಪನಿಕ ಸನ್ನಿವೇಶದ ಆಧಾರದಲ್ಲಿ ಕೇಂದ್ರ ಸಂಪುಟದಲ್ಲಿ ಅವಿಶ್ವಾಸ ನಿರ್ಣಯ ಮಾಡಬಾರದು. ಇನ್ನೂ ಅರ್ಹರನ್ನ ಮಾತ್ರ ಆಯ್ಕೆ ಮಾಡಲಾಗುತ್ತಿದೆ ಎಂದಿದೆ.
BIGG NEWS : BIP ಚುನಾವಣಾ ಪ್ರಚಾರಕ್ಕೆ ‘ಮಕ್ಕಳ ದುರ್ಬಳಕೆ’ : ನರೇಂದ್ರ ಮೋದಿ ವಿರುದ್ಧ ‘ಕಾಂಗ್ರೆಸ್ ದೂರು’ | NCPCR