ಚಾಮರಾಜನಗರ : ಮಳೆ ಹಾನಿ ಪರಿಶೀಲನೆಗೆ ಹೋದ ಅಧಿಕಾರಿಗಳೇ ನೀರಿನಲ್ಲಿ ಸಿಲುಕಿದ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೇಗಾಲ-ಆಲೂರು ನಡುವೆ ನಡೆದಿದೆ.
ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ನೀರಿನಲ್ಲಿ ಸಿಲುಕಿದ್ದು, ಆ ಹಳ್ಳದ ನೀರಿನಲ್ಲಿ ಸಿಲುಕಿದ್ದ ಅಧಿಕಾರಿಗಳನ್ನ ಸ್ಥಳೀಯರು ರಕ್ಷಿಸಿದ್ದಾರೆ.
ಅಧಿಕಾರಿಗಳು ಹೊಳೆ ದಾಟ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿದ್ದು, ನೀರು ರಭಸವಾಗಿ ಹರಿಯುತ್ತಿದ್ದಕ್ಕೆ ಕಾರಿನ ಮೇಲೆ ಹತ್ತಿ ನಿಂತಿದ್ದರು. ಆಗ ನೀರಿನಲ್ಲಿ ಮುಳುಗಿದ ಕಾರನ್ನ ಸ್ಥಳೀಯರು ಹಗ್ಗಕಟ್ಟಿ ಎಳೆದು ರಕ್ಷಿಸಿದ್ದಾರೆ. ಅದ್ರಂತೆ, ಅಧಿಕಾರಿಗಳಾದ ಎಇಇ ಕಾಂತರಾಜು, ಎಇ ರಾಜು, ಚಾಲಕ ಮುರುಗೇಶ್ ರಕ್ಷಣೆ ಮಾಡಿದ್ದಾರೆ.