ಕೆಎನ್ಎನ್ಡಿಜಿಟಲ್ ಡೆಸ್ಕ್ : ಪತ್ರಾ ಚಾಲ್ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವ್ರ ಇಡಿ ಕಸ್ಟಡಿ ಅವಧಿಯನ್ನ ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದೆ.
Mumbai | Shiv Sena MP Sanjay Raut sent to ED custody till 8th August in connection with a money laundering case in the Patra Chawl land case. pic.twitter.com/qbcz11BenB
— ANI (@ANI) August 4, 2022
ಹೌದು, ಶಿವಸೇನಾ ಸಂಸದ ಸಂಜಯ್ ರಾವತ್ಗೆ ಸಧ್ಯಕ್ಕೆ ರಿಲೀಫ್ ಸಿಗುವಂತೆ ಕಾಣುತ್ತಿಲ್ಲ. ಯಾಕಂದ್ರೆ, ರಾವತ್ರನ್ನ ನ್ಯಾಯಾಲಯವು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ಒಪ್ಪಿಸಿದೆ.
ಇಂದು ಸಂಜಯ್ ರಾವತ್ ಕಸ್ಟಡಿ ಅವಧಿ ಮುಗಿದಿದ್ದು, ನಂತ್ರ ಅವರನ್ನ ಇಡಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಮೂಲಕ ಕೋರ್ಟ್ ಐದು ದಿನಗಳ ಕಾಲ ಇಡಿಯ ಕಸ್ಟಡಿಗೆ ಕಳುಹಿಸಲು ನಿರ್ಧರಿಸಿದೆ.
ಒಂದು ದಿನದ ವಿಚಾರಣೆಯ ನಂತರ ಜುಲೈ 31ರ ರಾತ್ರಿ ಇಡಿ ರಾವತ್ ಬಂಧಿಸಿತ್ತು.