ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ ಆತಂಕಪಡುವುದು ಬೇಡ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್ ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ. ಕೊರೊನಾ ಹೊಸತಳಿ ಜನರ ಮೇಲೆ ಗಂಭೀರ ಪರಿಣಾ,ಮ ಬೀರಲ್ಲ, ಈಗಾಗಲೇ 85 ರಷ್ಟು ಮಂದಿಗೆ ಕೊರೊನಾ ಬಂದು ಹೋಗಿದೆ. ತಜ್ಞರು ಅಧ್ಯಯನ ನಡೆಸಿ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ. ಒಮಿಕ್ರಾನ್ ಎಕ್ಸ್ ಬಿಬಿ 1.5 ಯಿಂದ ಯಾವುದೇ ಆತಂಕ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ.
ಇನ್ನೂ, ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯನಂದನದ ಮೂಲಕ ಮಕ್ಕಳ ವೈದ್ಯರೊಂದಿಗೆ ಆರ್.ಬಿ.ಎಸ್.ಕೆ ತಂಡ ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಎಲ್ಲ ಜಿಲ್ಲೆಗಳು ಮತ್ತು 167 ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆಗಳು ದೊರೆಯುತ್ತಿವೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಸಿಎಂ ವಿರುದ್ಧ ‘ನಾಯಿ ಮರಿ’ ಹೇಳಿಕೆಗೆ ಮತ್ತೆ ಸಿದ್ದರಾಮಯ್ಯ ಸಮರ್ಥನೆ..ಇವತ್ತೇನಂದ್ರು..?