ಕಲಬುರಗಿ : ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಎನ್ಐಎ ಅಧಿಕಾರಿಗಳು SDPI, PFI ಕಚೇರಿ ಮೇಲೆ ದಾಳಿ ನಡೆಸಿದ್ದು, ಪಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
https://kannadanewsnow.com/kannada/wp-admin/edit.php
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಲಬುರಗಿಯಲ್ಲೂ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಕಲಬುರಗಿ ಜಿಲ್ಲಾ ಪಿಎಫ್ ಐ ಅಧ್ಯಕ್ಷ ಶೇಕ್ ಎಜಾಜ್ ಅಹ್ಮದ್ ಹಾಗೂ ಶಾಹೀದ್ ನಸೀರ್ ನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗಿನ ಜಾವ ಕಲಬುರಗಿ ನಗರದ ಟಿಪ್ಪು ಚೌಕ್ ನಲ್ಲಿರುವ ಪಿಎಫ್ ಐ ಅಧ್ಯಕ್ಷ ಶೇಕ್ ಎಜಾಜ್ ಅಹ್ಮದ್ ಹಾಗೂ ಶಾಹೀದ್ ನಸೀರ್ ನಿವಾಸಗಳ ಮೇಲೆ ಎನ್ ಐಎ ಅಧಿಕಾರಿಗಳ ತಂಡ ಮಾಡಿ ವಶಕ್ಕೆ ಪಡೆದಿದ್ದಾರೆ.